ಸಂಸದರ ಪ್ರದೇಶಾಭಿವೃದ್ಧಿ ನಿಧಿ

ಬೆಂಗಳೂರು ಗ್ರಾಮಾಂತರ ಸಂಸದರಾದ ಡಿ.ಕೆ.ಸುರೇಶ್ ಅವರು ಕ್ಷೇತ್ರದಾದ್ಯಂತ ಧೀರ್ಘ ಕಾಲದ ಮೂಲಸೌಕರ್ಯಗಳ ಸ್ಥಾಪನೆ ಉದ್ದೇಶದಿಂದ MPLAD (ಸಂಸದರ ಪ್ರದೇಶಾಭಿವೃದ್ಧಿ ನಿಧಿ) ಹಣವನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸಿದ್ದಾರೆ. ಕನಿಷ್ಠ ದರದಲ್ಲಿ ಶುದ್ಧ ಕುಡಿಯುವ ನೀರನ್ನು ಒದಗಿಸಲು ಕ್ಷೇತ್ರದಾದ್ಯಂತ 281 ಕ್ಕೂ ಹೆಚ್ಚು RO ಪ್ಲಾಂಟ್ ಗಳ ಸ್ಥಾಪಿಸಲಾಗಿದೆ. ಮೃತರಿಗೆ ಗೌರವಯುತ ಅಂತ್ಯಸಂಸ್ಕಾರಕ್ಕಾಗಿ ವಿದ್ಯುತ್ ಚಿತಾಗಾರಗಳ ನಿರ್ಮಾಣ ಮಾಡಲಾಗಿದೆ. ಪ್ರಯಾಣಿಕರ ಆಯಾಸವನ್ನು ನಿವಾರಿಸಲು ಹೈಟೆಕ್ ಬಸ್ ನಿಲ್ದಾಣಗಳು ಮತ್ತು ಸಮುದಾಯದ ಅಗತ್ಯಗಳ ಪೂರೈಕೆಗೆ ಅಂಬೇಡ್ಕರ್ ಭವನಗಳ ನಿರ್ಮಾಣ ಕೂಡಾ ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ ಸಾಕಾರಗೊಂಡಿದೆ.