ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ದೇಶದ ಜನತೆ ಎಲ್ಲಾ ಭರವಸೆಗಳನ್ನೂ ಕಳೆದುಹೋದಾಗ ಡಿಕೆ ಸುರೇಶ್ ಬಲವಾಗಿ ಕ್ಷೇತ್ರದ ಜನತೆಗೆ ಹೆಗಲಾಗಿ ನಿಂತರು. ಕ್ಷೇತ್ರದಾದ್ಯಂತ 10 ಸಾವಿರ ಟನ್ಗೂ ಅಧಿಕ ರೈತರ ತರಕಾರಿ ಮತ್ತು ಹಣ್ಣುಗಳ ಉತ್ಪನ್ನಗಳನ್ನು ಖರೀದಿಸಿ, ವಿತರಿಸುವ ಜವಾಬ್ದಾರಿ ಹೊತ್ತಿದ್ದು ದಾಖಲಾರ್ಹ ಸಂಗತಿಯಾಗಿದೆ. ಆರೋಗ್ಯ ರಕ್ಷಣೆಯ ಉದ್ದೇಶದಿಂದ ವೈದ್ಯಕೀಯ ಕಿಟ್ಗಳು ಮತ್ತು ಆಸ್ಪತ್ರೆಯಲ್ಲಿ ರೋಗಿಗಳ ಚಿಕಿತ್ಸೆಗೆ ಹಾಸಿಗೆಗಳನ್ನು ವ್ಯವಸ್ಥೆಗೊಳಿಸಲಾಯಿತು. ಅಷ್ಟೆ ಅಲ್ಲದೆ ಸಾಂಕ್ರಾಮಿಕಕ್ಕೆ ಸತ್ತವರ ಗೌರವಾನ್ವಿತ ಅಂತ್ಯಕ್ರಿಯೆಯಲ್ಲಿ ಖುದ್ದು ಡಿಕೆ ಸುರೇಶ್ ಭಾಗಿಯಾಗಿ ನೆರವೇರಿಸಿದ್ದಾರೆ. ತನ್ನ ಪ್ರಾಣದ ಮೇಲೂ ಕಾಳಜಿ ವಹಿಸದ ಡಿ.ಕೆ.ಸುರೇಶ್ ಒಬ್ಬ ಜನಪ್ರತಿನಿಧಿ ಹೇಗಿರಬೇಕು ಎಂಬುದಕ್ಕೆ ಸಾಕ್ಷಿಯಾಗಿ ನಿಂತಿದ್ದಾರೆ.