ಅನ್ನದಾತರು ನಮ್ಮ ದೇಶದ ಬೆನ್ನೆಲುಬು. ಈ ಚಿಂತನೆಯೊಂದಿಗೆ ಡಿ.ಕೆ.ಸುರೇಶ್ ಅವರು ಕ್ಷೇತ್ರದಾದ್ಯಂತ ರೈತರ ಅನುಕೂಲಕ್ಕೆ ಹಲವು ಅನುದಾನಗಳನ್ನು ತಂದಿದ್ದಾರೆ. ಬಮುಲ್ ಮತ್ತು ಕೆಎಂಎಫ್ ಸಹಯೋಗದಲ್ಲಿ ಮೆಗಾ ಡೈರಿ ಸ್ಥಾಪನೆ, ಬೃಹತ್ ಹಾಲಿನ ಪುಡಿ ಘಟಕ ಸ್ಥಾಪಿಸಲಾಗಿದೆ. ಹಾಗೆಯೇ ರೈತರ ಸಾಲವನ್ನು ಮನ್ನಾ ಮಾಡಲಾಗಿದೆ. ಕೃಷಿ ಅನುಕೂಲಕ್ಕಾಗಿ ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದೆ ಮತ್ತು ರೇಷ್ಮೆ-ಕೋಕೂನ್ ಮಾರುಕಟ್ಟೆ ಮತ್ತು ಇ-ಹರಾಜು ಮಾರುಕಟ್ಟೆಯಂತಹ ಯೋಜನೆಗಳೊಂದಿಗೆ ರಾಮನಗರದಲ್ಲಿ ರೇಷ್ಮೆ ಉದ್ಯಮಕ್ಕೆ ಉತ್ತೇಜನ ನೀಡಲಾಗಿದೆ.