ಡಿ.ಕೆ.ಸುರೇಶ್ ಒಬ್ಬ ನಿಷ್ಠಾವಂತ ಕಾಂಗ್ರೆಸ್ ನಾಯಕ ಹಾಗೂ ತನ್ನ ಕ್ಷೇತ್ರದ ಬಗ್ಗೆ ಆಳವಾದ ಅರಿವಿರುವ ರಾಜಕಾರಣಿಯಾಗಿದ್ದಾರೆ. ಸದಾ ಜನರೊಂದಿಗೆ ಬೆರೆತು, ಜನರ ಕಷ್ಟಗಳನ್ನು ಆಲಿಸುವ ಮೂಲಕ ಕ್ಷೇತ್ರದ ಜನರ ಅಗತ್ಯತೆಗಳ ಬಗ್ಗೆ ತಿಳುವಳಿಕೆಯುಳ್ಳ ಜನನಾಯಕ ಎಂಬ ಹೆಗ್ಗಳಿಕೆ ಇವರ ಮೇಲಿದೆ. ಕನ್ನಡ ನಾಡು, ನುಡಿ, ನೆಲ ಜಲದ ಪರವಾಗಿ ಅತ್ಯಂತ ಕಷ್ಟದ ಸಂದರ್ಭದಲ್ಲೂ ನಿರ್ಭೀತಿಯಿಂದ ನಿಂತ ಏಕೈಕ ಸಂಸದ ಡಿ.ಕೆ.ಸುರೇಶ್. ತನ್ನನ್ನು ನಂಬಿದ ಜನರ ಧ್ವನಿಯಾಗಿ ಕೆಲಸ ಮಾಡಿದ್ದಾರೆ. ಆಡಳಿತದಲ್ಲಿ ಪಾರದರ್ಶಕತೆ ಮತ್ತು ಜವಾಬ್ದಾರಿಯುತ ನಡೆಯೇ ಅವರ ವಿಶಿಷ್ಟ ಗುಣವಾಗಿದೆ. ಈ ಗುಣವೇ ಇಂದು ಅವರನ್ನು ಜನರ ನಂಬಿಕೆ ಮತ್ತು ವಿಶ್ವಾಸ ಹೆಚ್ಚಿಸುವಂತೆ ಬೆಳೆಸಿದೆ.