ಮೂರು ಬಾರಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದರಾಗಿರುವ ಡಿಕೆ ಸುರೇಶ್ ಅವರು ಮಾಡಿರುವ ಜನಪ್ರಿಯ ಕಾರ್ಯಕ್ರಮಗಳು ಇಡೀ ದೇಶದಲ್ಲಿಯೇ ಮಾದರಿಯಾಗಿವೆ. ಕೇವಲ 2 ರೂಪಾಯಿಗೆ 20 ಲೀಟರ್ ಶುದ್ಧಕುಡಿಯುವ ನೀರು ಒದಗಿಸಿ ಕ್ಷೇತ್ರದ ಜನರ ಆರೋಗ್ಯ ಕಾಪಾಡಿದ್ದಾರೆ. ಬೇರೆ ಕ್ಷೇತ್ರಗಳಿಗಿಂತ ಅತ್ಯುತ್ತಮವಾಗಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಆರೋಗ್ಯ, ಕೃಷಿ, ಮಹಿಳಾ ಸಬಲೀಕರಣ, ಸಾಮಾಜಿಕ, ಕ್ರೀಡೆ ಸೇರಿದಂತೆ ಮುಂತಾದ ವಲಯಗಳಲ್ಲಿ ಜನಪ್ರಿಯ ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಕ್ಷೇತ್ರದ ಅಭಿವೃದ್ಧಿ ಜೊತೆಗೆ ಕರ್ನಾಟಕದ ಪರವಾಗಿ ಕನ್ನಡಿಗರ ಹಿತಾಸಕ್ತಿಗಾಗಿ ಸಂಸತ್ತಿನಲ್ಲಿ ಧ್ವನಿ ಎತ್ತಿದ್ದಾರೆ.
ಮೂರು ಬಾರಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದರಾಗಿರುವ ಡಿಕೆ ಸುರೇಶ್ ಅವರು ಮಾಡಿರುವ ಜನಪ್ರಿಯ ಕಾರ್ಯಕ್ರಮಗಳು ಇಡೀ ದೇಶದಲ್ಲಿಯೇ ಮಾದರಿಯಾಗಿವೆ. ಕೇವಲ 2 ರೂಪಾಯಿಗೆ 20 ಲೀಟರ್ ಶುದ್ಧಕುಡಿಯುವ ನೀರು ಒದಗಿಸಿ ಕ್ಷೇತ್ರದ ಜನರ ಆರೋಗ್ಯ ಕಾಪಾಡಿದ್ದಾರೆ. ಬೇರೆ ಕ್ಷೇತ್ರಗಳಿಗಿಂತ ಅತ್ಯುತ್ತಮವಾಗಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಆರೋಗ್ಯ, ಕೃಷಿ, ಮಹಿಳಾ ಸಬಲೀಕರಣ, ಸಾಮಾಜಿಕ, ಕ್ರೀಡೆ ಸೇರಿದಂತೆ ಮುಂತಾದ ವಲಯಗಳಲ್ಲಿ ಜನಪ್ರಿಯ ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಕ್ಷೇತ್ರದ ಅಭಿವೃದ್ಧಿ ಜೊತೆಗೆ ಕರ್ನಾಟಕದ ಪರವಾಗಿ ಕನ್ನಡಿಗರ ಹಿತಾಸಕ್ತಿಗಾಗಿ ಸಂಸತ್ತಿನಲ್ಲಿ ಧ್ವನಿ ಎತ್ತಿದ್ದಾರೆ.
ಕಾಂಗ್ರೆಸ್ ನಾಯಕರಾದ ಡಿಕೆ ಶಿವಕುಮಾರ್ ಅವರ ಬೆನ್ನೆಲುಬಾಗಿರುವುದರಿಂದ ಹಿಡಿದು ತಮ್ಮದೇ ಆದ ರಾಜಕೀಯ ಛಾಪು ಮೂಡಿಸಿದ್ದಾರೆ. ಸಂಸದರಾಗಿ ಕ್ಷೇತ್ರದ ಅಭಿವೃದ್ಧಿಯ ಜೊತೆಗೆ ಹಲವು ಮಾನವೀಯ ಕಾರ್ಯಗಳನ್ನು ಡಿಕೆ ಸುರೇಶ್ ಅವರು ಮಾಡಿರುವುದು ಹೆಮ್ಮೆಯ ಸಂಗತಿ. ಕ್ಷೇತ್ರದ ಜನತೆಗೆ ಸರ್ಕಾರಿ ಸೇವೆಗಳನ್ನು ಸುಲಭವಾಗಿ ಸಿಗುವಂತೆ ಮಾಡುವ ಮೂಲಕ ಜನಪರ ಆಡಳಿತವನ್ನು ನೀಡುತ್ತಿದ್ದಾರೆ.
2013 ರಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ದಾಖಲಿಸಿ, ಡಿ.ಕೆ.ಸುರೇಶ್ ಮೊದಲ ಬಾರಿಗೆ ಸಂಸತ್ತಿಗೆ ಆಯ್ಕೆಯಾದರು. ಆ ನಂತರ ರಾಜಕೀಯ ಮತ್ತು ಅಭಿವೃದ್ಧಿ ಕಾರ್ಯಗಳಲ್ಲಿ ಅವರು ಹಿಂತಿರುಗಿ ನೋಡಿಯೇ ಇಲ್ಲ. ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸಲು ಹಲವು ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಂಡರು. ಕ್ಷೇತ್ರದ ಸಮಗ್ರ ಅಭಿವೃದ್ಧಿ ಜೊತೆಗೆ ಕ್ಷೇತ್ರದ ಜನರೊಂದಿಗೆ ಅತ್ಯುತ್ತಮ ಒಡನಾಟ ಹೊಂದಿರುವುದರಿಂದ ಮೂರನೇ ಬಾರಿಗೆ ಸಂಸದರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಳೆದ 11 ವರ್ಷಗಳಿಂದ ಮೂರು ಅವಧಿಗಳಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ದಣಿವರಿಯದೆ ಸೇವೆ ಸಲ್ಲಿಸುತ್ತಿದ್ದಾರೆ.
ನಮ್ಮ ನೆಲ, ಜಲ ಮತ್ತು ಭಾಷೆಯ ಬಗ್ಗೆ ಡಿಕೆ ಸುರೇಶ್ ಅವರು ಅಪಾರವಾದ ಗೌರವವನ್ನು ಹೊಂದಿದ್ದಾರೆ. ತಮ್ಮದೇ ಆದ DKS ಚಾರಿಟೇಬಲ್ ಟ್ರಸ್ಟ್ ಮೂಲಕ ಸಮಾಜ ಸೇವೆ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಕ್ಷೇತ್ರದ ಜನತೆಗೆ ಅಗತ್ಯವಾಗಿರುವ ಸೇವೆಗಳನ್ನು ಪ್ರಾಮಾಣಿಕವಾಗಿ ತಲುಪಿಸುವ ಕಾರ್ಯವನ್ನು ಡಿಕೆ ಸುರೇಶ್ ಅವರು ಮಾಡಿದ್ದಾರೆ. ಒಬ್ಬ ಸಂಸದರಾಗಿ ಪ್ರತಿನಿಧಿಸುವ ಕ್ಷೇತ್ರದ ಅಭಿವೃದ್ಧಿಗಾಗಿ ಅಪಾರ ಕೊಡುಗೆಗಳನ್ನು ನೀಡುವ ಮೂಲಕ ತಮ್ಮ ಸ್ಥಾನಕ್ಕೆ ಸಮರ್ಥವಾಗಿ ನ್ಯಾಯ ಒದಗಿಸಿದ್ದಾರೆ.
Year | Election | Constituency Name | Party | Result | Votes Gained | Vote Share | Margin |
2013 | By Election | Bangalore Rural | INC | Won | 5,78,608 | 54.93% | 1,37,007 |
2014 | General Election | Bangalore Rural | INC | Won | 6,52,723 | 44.85% | 2,31,480 |
2019 | General Election | Bangalore Rural | INC | Won | 8,78,258 | 54.15% | 2,06,870 |
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕುಡಿಯುವ ನೀರಿನ ಕ್ರಾಂತಿ. RO ಪ್ಲಾಂಟ್‌ಗಳ ಸ್ಥಾಪನೆ – 20 ಲೀಟರ್‌ಗೆ ಕೇವಲ 2 ರೂ.
ಅತ್ಯಾಧುನಿಕ ತಂತ್ರಜ್ಞಾನದ ಬಸ್ ನಿಲ್ದಾಣಗಳ ನಿರ್ಮಾಣ, ಕೆರೆಗಳ ಅಭಿವೃದ್ಧಿಗಾಗಿ MPLADS ಅನ್ನು ಗರಿಷ್ಠಗೊಳಿಸುವುದು.
MGNREGA ಅನುಷ್ಠಾನಕ್ಕೆ ಬೆಂಗಳೂರು ಗ್ರಾಮಾಂತರ ಮಾದರಿ ಕ್ಷೇತ್ರವಾಗಿದೆ – ಚೆಕ್ ಡ್ಯಾಂಗಳ ನಿರ್ಮಾಣ ಮತ್ತು ಅಂತರ್ಜಲ ಪುನಶ್ಚೇತನ
ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ರೈತರಿಂದ 10000 ಟನ್‌ಗಳಿಗಿಂತ ಹೆಚ್ಚು ಹಣ್ಣುಗಳು ಮತ್ತು ತರಕಾರಿಗಳನ್ನು ಸಂಗ್ರಹಿಸುವುದು ಮತ್ತು ಅದನ್ನು ಮನೆ ಮನೆಗೆ ವಿತರಿಸುವುದು.
ಅಗಲಿದವರಿಗೆ ಗೌರವಯುತವಾಗಿ ಬೀಳ್ಕೊಡಲು ವಿಧಾನಸಭಾ ಕ್ಷೇತ್ರದಾದ್ಯಂತ ವಿದ್ಯುತ್ ಚಿತಾಗಾರಗಳು.
ತರಬೇತಿ ಕೋರ್ಸ್‌ಗಳ ಮೂಲಕ ಶಿಕ್ಷಣಕ್ಕೆ ಒತ್ತು ನೀಡುವುದು ಮತ್ತು ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್‌ರೂಮ್‌ಗಳ ಪರಿಚಯ.
ಸಾಮಾನ್ಯ ಟ್ರಾನ್ಸಫಾರ್ಮರ್ ಗಳಿಂದ HVDS ಟ್ರಾನ್ಸಫಾರ್ಮರ್ ಗಳಿಗೆ ಬದಲಾಯಿಸಲು ಅತ್ಯಾಧುನಿಕ ತಂತ್ರಜ್ಞಾನದ ಬಳಕೆ, ಜನ ಸಾಮಾನ್ಯರ ಬದುಕಲ್ಲಿ ಹೊಸ ಚೈತನ್ಯ
ಪಕ್ಷದ ಡೈನಾಮಿಕ್ ನಾಯಕ – ಕರ್ನಾಟಕದಲ್ಲಿ ಮೇಕೆದಾಟು ಮತ್ತು ಭಾರತ ಜೋಡೋ ಯಾತ್ರೆಯಲ್ಲಿ ಮುಂಚೂಣಿ ಪಾತ್ರ
ಕನ್ನಡಿಗರ ಹಕ್ಕುಗಳ ಪ್ರಬಲ ನ್ಯಾಯವಾದಿ
ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಜನರಿಗೆ ಉತ್ತಮ ಆರೋಗ್ಯ, ಗುಣಮಟ್ಟದ ಜೀವನವನ್ನು ಒದಗಿಸುವುದು ಡಿಕೆ ಸುರೇಶ್ ಅವರ ಪ್ರಮುಖ ಧ್ಯೇಯವಾಗಿದೆ. ಅಭಿವೃದ್ಧಿಯ ಮೂಲದ ದಕ್ಷ ಆಡಳಿತವನ್ನು ನೀಡಿರುವ ಡಿ.ಕೆ.ಸುರೇಶ್ ಅವರು ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಮಾದರಿ ಸರ್ಕಾರಿ ಶಾಲೆಗಳ ಸ್ಥಾಪನೆಗೆ ಹೆಚ್ಚು ಒತ್ತು ನೀಡಲಿದ್ದಾರೆ. CSR ನಿಧಿಯ ಸದ್ಬಳಕೆಯಿಂದ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯನ್ನು ಮಾಡುವ ಸಂಕಲ್ಪ ಹೊಂದಿದ್ದಾರೆ. ಇದು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಅದ್ಭುತ ಭವಿಷ್ಯದ ಮುಂದಾಲೋಚನೆ ಆಗಿದೆ. ಕ್ಷೇತ್ರದಾದ್ಯಂತ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಕ ವಿಶ್ವ ದರ್ಜೆಯ ಆರೋಗ್ಯ ಸೇವೆ ಒದಗಿಸುವ ಗುರಿಯನ್ನು ಹೊಂದಿದ್ದಾರೆ. ಆರೋಗ್ಯ ಎಂಬುದು ಪ್ರತಿಯೊಬ್ಬರ ಮೂಲಭೂತ ಹಕ್ಕು. ಅದು ಪ್ರತಿಯೊಬ್ಬ ಜನಸಾಮಾನ್ಯರಿಗೂ ಸಿಗಬೇಕು ಎಂಬುದು ಇದರ ಪ್ರಮುಖ ಉದ್ದೇಶವಾಗಿದೆ.
ಕರ್ನಾಟಕದ ಏಕೈಕ ಸಂಸದ ಡಿ.ಕೆ.ಸುರೇಶ್ ಅವರು ಕನ್ನಡಿಗರ ಸಮಸ್ಯೆಗಳಿಗೆ ಧ್ವನಿಗೂಡಿಸಿದರು. ಅವರ ಹೇಳಿಕೆಗಳು ಕರ್ನಾಟಕದಾದ್ಯಂತ ಮತ್ತು ಅಧಿಕಾರದ ಚೇಂಬರ್‌ಗಳಿಂದ ಪ್ರತಿಧ್ವನಿಸುತ್ತಿವೆ – ಕರ್ನಾಟಕ ಸರ್ಕಾರದಿಂದ ದೆಹಲಿಯಲ್ಲಿ ಪ್ರತಿಭಟನೆಗೆ ಕಾರಣವಾಯಿತು. ಅವರು ವಾಸ್ತವವಾಗಿ “ಮೈ ಟ್ಯಾಕ್ಸ್ ಮೈ ರೈಟ್ ಮೂವ್‌ಮೆಂಟ್” ಅನ್ನು ಮುನ್ನಡೆಸಿದರು ಮತ್ತು ಅನ್ಯಾಯದ ಕುರಿತು ಕೇಂದ್ರವನ್ನು ಪ್ರಶ್ನಿಸುವುದನ್ನು ಮುಂದುವರೆಸಿದ್ದಾರೆ ಮತ್ತು ರಾಜ್ಯಕ್ಕೆ ನ್ಯಾಯವನ್ನು ಹುಡುಕುತ್ತಿದ್ದಾರೆ.
ಡಿ.ಕೆ.ಸುರೇಶ್ ಎಂದಿಗೂ ಕನ್ನಡಿಗರ ಪರವಾಗಿ ನಿಂತ ಕನ್ನಡದ ಕಾವಲುಗಾರ. ಕೇಂದ್ರದಿಂದ ಕರ್ನಾಟಕಕ್ಕೆ ಆಗುತ್ತಿರುವ ನಿರಂತರ ತೆರಿಗೆ ಅನ್ಯಾಯದ ವಿರುದ್ಧ ದನಿ ಎತ್ತಿದ್ದಾರೆ.
ಅಷ್ಟೇ ಅಲ್ಲದೇ, ನನ್ನ ತೆರಿಗೆ ನನ್ನ ಹಕ್ಕು ಚಳುವಳಿಯ ಪ್ರಮುಖ ನೇತಾರರಾಗಿ ಹೊರಹೊಮ್ಮಿದ್ದಾರೆ.
2024ರ ಬಜೆಟ್ ಮಂಡನೆ ವೇಳೆ ಕರ್ನಾಟಕಕ್ಕೆ ಆಗಿದ್ದ ಅನ್ಯಾಯದ ವಿರುದ್ಧ ದನಿ ಎತ್ತಿದ್ದಾರೆ. ನಾಡು-ನುಡಿಗಾಗಿ ವಿರೋಧಿಗಳ ಮಾತಿಗೆ ಜಗ್ಗದೇ ಕನ್ನಡಿಗರ ಪರವಾಗಿ ದನಿ ಎತ್ತುತ್ತಿರುವ ರಾಜ್ಯದ ಏಕೈಕ ಸಂಸದ. ರಾಜ್ಯಕ್ಕೆ ಆಗುತ್ತಿರುವ ನಿರಂತರ ಅನ್ಯಾಯವನ್ನು ವಿರೋಧಿಸುವುದು ನನ್ನ ಕರ್ತವ್ಯ ಎಂದು ಅವರು ಬಲವಾಗಿ ನಂಬಿದ್ದಾರೆ. 2024ರ ಕೇಂದ್ರದ ಬಜೆಟ್ ಮಂಡನೆಯಲ್ಲಿ ಕರ್ನಾಟಕಕ್ಕೆ ಆದ ಅನ್ಯಾಯದ ವಿರುದ್ಧ ಕೇಂದ್ರದ ಎದುರು ದನಿಯೆತ್ತಿದ ಕರ್ನಾಟಕದ ಏಕೈಕ ಸಂಸದರಾಗಿದ್ದಾರೆ.